ಕನ್ನಡ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ, ಬಾಹು ಬಂಧನ ಚುಂಬನ ಹೂವು ಹಾಸಿಗೆ ಚಂದ್ರ ಚಂದನ, ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಯೊಳಗೆ ಕರಣಗಳದೀ ಈ ರಿಂಗಣ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ವಿವಶವಾಯಿತು ಪ್ರಾಣ ಹಾ!……. ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
Roman script
Yaava mohana murali kareyitu doora teerake ninnanu yaava brindavanavu seleyitu ninna minchina kannanu Hoovu Hasige Chandra Chandana Bahu Bandhana Chumbana Bayake Totada Beeliyolage Karanagaladee Ringana Sapta Sagaradaache Yello Supta Sagara Kaadide Moleyadalegala Mooka Marmara Indu Illigu Haayite vivashavayitu praana – hah!! vivashavayitu praana – hah Paravashavu ninnee chetana vivashavayitu praana – hah Paravashavu ninnee chetana iruvudellava bittu iradudaredege tudivude jeevana yaava mohana murali kareyitu iddakiddale ninnanu Yaava brindavanavu chaachitu tanna minchina kayyanu yaave mohana murali kareyithu doora teerake ninnanu
Song information
Genre: Bhavageethe
Lyricist: M. Gopalakrishna Adiga
Composer: Mysore Ananthaswamy
Explore this song
- Composer: Mysore Ananthaswamy
- Lyricist: M. Gopalakrishna Adiga