ಕನ್ನಡ

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು ||ಎದೆ ತುಂಬಿ||

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ ||ಇಂದು ನಾ ||

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? ||ಎದೆ ತುಂಬಿ||

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ ||ಎಲ್ಲ ಕೇಳಲಿ ||

ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈ ದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರೂ (x2 )
ನನಗಿಲ್ಲ ಚಿಂತೆ ||ಎದೆ ತುಂಬಿ||

Roman script

Ede tumbi hāḍidenu andu nānu
manaviṭṭu kēḷidiri alli nīvu||ede tumbi||

indu nā hāḍidaru andinanteye kuḷitu
kēḷuviri sākenage aduve bahumāna||indu nā ||

hāḍu hakkige bēke birudu sanmāna?||Ede tumbi||

ella kēḷali endu nānu hāḍuvudilla
hāḍuvudu anivārya karma nanage||ella kēḷali ||

kēḷuvavariharendu nā balle adarinda
hāḍuvenu mai dumbi endinante
yāru kivi muccidarū (x2)
nanagilla chinte|ede tumbi||

Song information

Genre: Bhavageethe

Lyricist: Dr. G. S. Shivarudrappa

Composer: Mysore Ananthaswamy

Explore this song