ಕನ್ನಡ
ಯಾರಿಗೂ ಹೇಳೋಣು ಬ್ಯಾಡ ಹಾರಗುದರಿ ಬೆನ್ನ ಏರಿ ಸ್ವಾರರಾಗಿ ಕೂತು ಹಾಂಗ ದೂರ ದೂರ ಹೋಗೋಣಾಂತ ||೧|| ಯಾರಿಗೂ ಹೇಳೋಣು ಬ್ಯಾಡ ಹಣ್ಣು ಹೂವು ತುಂಬಿದಂಥ ನಿನ್ನ ತೋಟ ಸೇರಿ ಒಂದ ತಿನ್ನೋಣಂತ ಅದರ ಹೆಸರ || ೨ || ಯಾರಿಗೂ ಹೇಳೋಣು ಬ್ಯಾಡ ಕುಣಿಯೋಣಂತ ಕೂಡಿ ಕೂಡಿ ಮಣಿಯೋಣಂತ ಜಿಗಿದು ಹಾರಿ ದಣಿಯದಲೇ ಆಡೋಣಂತ || ೩ || ಯಾರಿಗೂ ಹೇಳೋಣು ಬ್ಯಾಡ ಮಲ್ಲಿಗಿ ಮಂಟಪದಾಗ ಗಲ್ಲ ಗಲ್ಲ ಹಚ್ಚಿ ಕೂತು ಮೆಲ್ಲ ದನಿಲೆ ಹಾಡೋಣಂತ || ೪ || ಯಾರಿಗೂ ಹೇಳೋಣು ಬ್ಯಾಡ ಹಾವಿನ ಮರಿಯಾಗಿ ಅಲ್ಲಿ ನಾವೂನೂ ಹೆಡೆಯಾಡಿಸೋಣ ಹೂವೆ ಹೂವು ಹಸಿರೆ ಹಸಿರು || ೫ || ಯಾರಿಗೂ ಹೇಳೋಣು ಬ್ಯಾಡ ನಿದ್ದೆ ಮಾಡಿ ಮೈಯ ಬಿಟ್ಟು ಮುದ್ದು ಮಾಟದ ಕನಸಿನೂರಿಗೆ ಸದ್ದು ಮಾಡದೆ ಸಾಗೊಣಂತ ಯಾರಿಗೂ ಹೇಳೋಣು ಬ್ಯಾಡ || ೬ ||
Roman script
Yarigu helona byada Haaragudhuri benna yeri Swara ragi kuthu hanga Dura dura hogonantha || Yarigu helona byada Hannu huvu tumbidantha Ninna thota seri ondu Tinonnanta adhara hesaru || Yarigu helona byada Kuniyonantha kudi kudi Maniyonantha jigidhu haari Dhaniyadhale adonantha || Yarigu helona byada Maaligi mantapadhaga Galla galla hachi kuthu Mella dhanile Hadonantha || Yarigu helona byada Haavina mariyagi alli Navunu hedeyadisonna Huve huvu hasire hasiru || Yarigu helona byada Nidhe madi maiya bittu Mudhu maatada kanasinorige Sadhu madade sagonanta Yarigu helona byada ||
Song information
Genre: Bhavageethe
Lyricist: Da. Ra. Bendre
Composer: Mysore Ananthaswamy
Explore this song
- Composer: Mysore Ananthaswamy
- Lyricist: Da. Ra. Bendre