ಕನ್ನಡ
ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋ ||ಎಲ್ಲಿ|| ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ (x2) ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ ||ಎಲ್ಲಿ|| ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೊರೆ (x2) ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ ||ಎಲ್ಲಿ|| ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು (x2) ಬಂದು ಕಾಡುತಿರಲು ಎದೆಯ ಹೇಳಲಾರೆ ತಾಳಲಾರೆ ||ಎಲ್ಲಿ|| ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋ ||ಎಲ್ಲಿ||
Roman script
Elli jāritō manavu elle mīritō elli aleyutihudō ēke nilladayitō ||elli|| dūradondu tīradinda tēli pārijāta gandha (x2) dāṭi bantu bēlisāla mīṭi haḷeya madhura nōva ||elli|| bāninalli oṇṭi tāre sōne suriva iruḷa more (x2) kattalalli kuḷitu oḷage bikkutihaḷu yārō nīre ||elli|| hinde yāva janmadallō minda prēma jalada kampu (x2) bandu kāḍutiralu edeya hēḷalāre tāḷalāre ||elli|| elli jāritō manavu elle mīritō elli aleyutihudō ēke nilladayitō ||elli||
Song information
Genre: Bhavageethe
Lyricist: Dr. N.S. Lakshminarayana Bhatta
Composer: Mysore Ananthaswamy
Explore this song
- Composer: Mysore Ananthaswamy
- Lyricist: Dr. N.S. Lakshminarayana Bhatta