ಕನ್ನಡ
ಓ! ತ್ರಿಷಿತ ಚಂಚರೀಕ ಬಾರಾ ಹೃದಯ ಪುಂಡರೀಕ ನಿನ್ನನರಳಿ ಕಾದಿದೆ ।। ಎದೆಯ ತುಂಬ ಮಧುವನಿಟ್ಟು ದಾರಿಯೆಡೆಗೆ ದಿಟ್ಟಿ ಇಟ್ಟು ಬಯಸಿ ನೋಡಿ ಕಾದಿದೆ ಉದಯಾಚಲದಲ್ಲಿ ರವಿ ಬರುವ ಚಿನ್ಹೆ ಅರುಣ ಚವಿ ಓಕುಳಿಯಲಿ ಚಲ್ಲಿದೆ ಸರುವರದ ಸಲಿಲ ಮುಖಕೆ ಪ್ರಿಯ ಜನರ ಪ್ರೇಮ ಸುಖಕೆ ಓಕುಳಿಯನೆ ಚಲ್ಲಿದೆ ಮೂಡನೆಲರು ತೀಡುತಿದೆ ಕೆರಯ ನೀರು ನಡುಗುತಿದೆ ಹೂಬಟಲು ಬಳುಕಿದೆ ಮಧುಬಾರಕೆ ಪದುಮ ಪಾತ್ರೆ ಪೂರ್ವ ಪಶ್ಚಿಮಕ್ಕೆ ಯಾತ್ರೆ ಮಕರಂದವು ತುಳುಕಿದೆ ಬಾರಬೇಗ ಚಂಚರೀಕ ಬಾರಹೃದಯ ಪುಂಡರೀಕ ಹಂಬಲಿಸಿದೆ ನಿನ್ನನೆ ಬೇಗ ಹಿಂಡಿ ಹೀರು ನನ್ನ ಜೇನು ಸೋರಿ ಹೋಗೊ ಮುನ್ನ ಪ್ರೇಮ ಪಾನ ಧನ್ಯನೆ
Roman script
O! Trishita chancharika Baara hrudaya pundarika Ninnanarali kaadide || Edeya tumba madhuvaniittu Daariye dege ditti ittu Bayasi noodi kaadide Udayachaladalli ravi Baruva chinha aruna chavi Okuliyali challide Saruvarda salila mukhake Priya janara prema sukhake Okuliyane challide Moodanelaru teedutide Keraya neeru nadugutide Hoobatalu balukide Madhubaarake paduma patre Poorva paschimakke yaatre Makarandavu tulukide Baara bega chancharika Baara hrudaya pundarika Hambaliside ninnane Bega hindi heeru nanna Jenu sori hogo munna Prema paana dhanyane
Song information
Genre: Bhavageethe
Lyricist: Kuvempu
Explore this song
- Lyricist: Kuvempu