ಕನ್ನಡ
ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ||ದೋಣಿ ಸಾಗಲಿ|| ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ ಮಿಂಚುತಿರ್ಪುವು ಮೂಡುತೈತರೆ ಬಾಲಕೊಮಲ ದಿನಮಣಿ ಹಸಿರು ಜೋಳದ ಹೊಲದ ಗಾಳಿಯ ತೀಡಿ ತಣ್ಣಗೆ ಬರುತಿದೆ ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ ||ದೋಣಿ ಸಾಗಲಿ|| ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ ಅದನೆ ಹೋಲುತ, ಅಂತೆ ತೇಲುತ ದೋಣಿಆಟವನಾಡಿರಿ ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ ||ದೋಣಿ ಸಾಗಲಿ||
Roman script
Doni saagali, mundhe hogali, doora teerava serali beesu gaalige beelu teluva tereya megade haarali Honnagindiya hididu kaiolu hemavariya chimukisi meghamalege bannaveeyutha yakshalokava virachisi nodi moodanadaa diganthadi mooduvennina maisiri ranjisutthide cheluveyaakege suprabhatava bayasiri ||Doni saagali|| Kereya anchina mele minchina hanigalandadi himamani minchutirpuvu mudutaitare balakomala dinamani hasiru jolada holada gaaliya teedi tannage baruthide hudugi haaduva matthakokila madhuravaniya taruthide ||Doni saagali|| Doora bettada mele teluva biliya modava nodiri adane holutha, anthe teluta doniaatavanaadiri naavu leelamaatra jeevaru namma jeevana leelege ninne ninnege, indu indige, irali naaleyu naalege ||Doni saagali||
Song information
Genre: Melodic
Lyricist: Kuvempu
Composer: R. Sudarsanam
Explore this song
- Composer: R. Sudarsanam
- Lyricist: Kuvempu