ಕನ್ನಡ
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ||ಮುಂಗಾರಿನ|| ಪುಟಿದೆದ್ದಿತು ಚೆಲುವು ಬಾಯಾರಿದ ಬಯಕೆಗಳಲಿ ತಳ ತಳಿಸುವ ನೀರು ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ ಪ್ರೀತಿಯಂತ ಹಸಿರು||ಬಾಯಾರಿದ|| ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ಪುಟಿದೆದ್ದಿತು ಚೆಲುವು ಮೈ ಮನಗಳ ಕೊಂಬೆಯಲ್ಲಿ ಹೊಮ್ಮುವ ದನಿ ಇಂಪು ನಾಳೆಗೆ ನನಸಾಗುವ ಕನಸಿನ ಹೂವರಳುವ ತಂಪು||ಮೈ ಮನಗಳ || ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ಪುಟಿದೆದ್ದಿತು ಚೆಲುವು ಭರವಸೆಗಳ ಹೊಲಗಳಲ್ಲಿ ನೇಗಿಲ ಗೆರೆ ಕವನ ಶ್ರಾವಣದಲಿ ತೆನೆದೂಗುವ ಜೀವೋತ್ಸವ ಗಾನ||ಭರವಸೆಗಳ|| ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ||ಮುಂಗಾರಿನ|| ಪುಟಿದೆದ್ದಿತು ಚೆಲುವು
Roman script
mungarina abhishekake miduvayitu nelavu dhageyarida hrudayadalli putidedditu cheluvu ||mungarina|| putidedditu cheluvu bayarida bayakegalali tala talisuva neeru kannige tannage muttidutide preetiyanta hasiru||bayarida|| mungarina abhishekake miduvayitu nelavu dhageyarida hrudayadalli putidedditu cheluvu putidedditu cheluvu mai managala kombeyalli hommuva dani impu nalege nanasaguva kanasina hoovaraluva tampu||mai managala || mungarina abhishekake miduvayitu nelavu dhageyarida hrudayadalli putidedditu cheluvu putidedditu cheluvu bharavasegala holagalalli negila gere kavana shravanadali tenedooguva jeevotsava gaana||bharavasegala|| mungarina abhishekake miduvayitu nelavu dhageyarida hrudayadalli putidedditu cheluvu ||mungarina|| putidedditu cheluvu
Song information
Genre: Bhavageethe
Lyricist: G. S. Shivarudrappa
Composer: G.S. Shivarudrappa
Explore this song
- Composer: G.S. Shivarudrappa
- Lyricist: G. S. Shivarudrappa