ಕನ್ನಡ
ಕಾಣದ ಕಡಲಿಗೆ ... ಹಂಬಲಿಸಿದೆ ಮನ. ಕಾಣದ ಕಡಲಿಗೆ ಹಂಬಲಿಸಿದೆ ಮನ ... ಮನ.. ಮನ... ಕಾಣದ ಕಡಲಿಗೆ ಹಂಬಲಿಸಿದೆ ಮನ ||2|| ಕಾಣಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ ||2|| ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ ||2|| ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುಯ್ಯುತಿದೆ ಎಲ್ಲಿರುವುದೋ ಅದು ಎಂತಿರುವುದೋ ಅದು ನೋಡಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ ಕಾಣದ ಕಡಲಿಗೆ ಹಂಬಲಿಸಿದೆ ಮನ. ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ ||2|| ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ ಮುನ್ನೀರಂತೆ..., ಅಪಾರವಂತೆ..., ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ ಕಾಣದ ಕಡಲಿಗೆ ಹಂಬಲಿಸಿದೆ ಮನ ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು ಎಂದಿಗಾದರು.. ಎಂದಿಗಾದರು.. ಎಂದಿಗಾದರೂ ಕಾಣದ ಕಡಲನು ಸೇರಬಲ್ಲೆನೇನು... ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು,,, ನಾನು ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು... ಸೇರಬಹುದೇ ನಾನು... ಕಡಲ ನೀಲಿಯೊಳು ಕರಗಬಹುದೆ ನಾನು ಕರಗಬಹುದೆ ನಾನು ... ಕರಗಬಹುದೆ ನಾನು ... !!
Roman script
Kaanada kadalige... hambaliside mana Kaanada kadalige... hambaliside mana ... mana.. mana... Kaanada kadalige hambaliside mana ||2|| Kaanaballene ondu dina Kadalanu koodaballene ondu dina ||2|| Kaanada kadalige hambaliside mana Kaanada kadalina moretada jogula Olagivigindu kelutide ||2|| Nanna kalpaneyu tanna kadalane Chitrisi chintisi suyyutide Elliruvudo adu entiruvudo adu Nodaballene ondu dina Kadalanu koodaballene ondu dina Kaanada kadalige hambaliside mana Savira holegalu tumbi haridaru Onde samanagihudante Suneela vistara taranga shobhita Gambheerambhudhi tanante Munneerante.... apaaravante Kanaballene ondu dina Adarolu karagalarene ondu dina Kaanada kadalige hambaliside mana Jatila kananada kutila patagalali Hariva toreyu naanu Endigadaru .. Endigadaru .. Endigadaru Kanada kadalanu Seraballenenu... Jatila kananada kutila patagalali Hariva toreyu naanu Endigadaru kanada kadalanu seraballenenu Serabahude naanu Kadala neeliyolu karagabahude naanu karagabahude naanu .. karagabahude naanu ...!!
Song information
Genre: Bhavageethe
Lyricist: G. S. Shivarudrappa
Composer: C. Ashwath
Explore this song
- Composer: C. Ashwath
- Lyricist: G. S. Shivarudrappa