ಕನ್ನಡ
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ || ಎಲ್ಲೋ || ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ || ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||
Roman script
Ello hudukide illada devara Kallu mannugala gudiyolage Ille iruva preeti snehagala Gurutisadaadevu nammolage || Ello || Ellide Nandana ellide bandhana Ella ive ee nammolage Olagina tiliyanu kalakade iddare Amrutada saviyide nalagage || Ello || Hattiraviddu doora nilluvevu Namma ahamminda koteyali Eshtu kashtavo hondikeyembudu Naalku dinada ee badhukindalli || Ello ||
Song information
Genre: Bhavageethe
Lyricist: G. S. Shivarudrappa
Composer: C. Ashwath
Explore this song
- Composer: C. Ashwath
- Lyricist: G. S. Shivarudrappa