ಕನ್ನಡ
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು ಇನ್ನಿಲ್ಲವಾಯಿತೇ ಆ ಹಕ್ಕಿ ಹಾಡು ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ ಮುರಿದು ಹೋಯಿತೆ ಈಗ ಆ ಪುಟ್ಟ ಗೂಡು ||ತಪ್ಪಿ ಹೋಯಿತಲ್ಲೇ|| ಹನಿ ಹನಿಯಾಗಿ ತೊನೆದು ತೂಗಿದ ಪ್ರೀತಿ ಹರಿದು ಚೂರಾಯಿತೆ ಎದೆಯ ಒಲವಿನ ಬೀಡು ರೆಕ್ಕೆ ಬಡಿದೊತ್ತಿ ಎತ್ತಿಕೊಳ್ಳುವ ಹಕ್ಕಿ ಹಾಡಿನ ಜಾಡು ಹಿಡಿಯುತ್ತ ನನ್ನ ಪಾಡು ||ತಪ್ಪಿ ಹೋಯಿತಲ್ಲೇ|| ಎಲ್ಲಿ ಹೋಯಿತು ವಲಸೆ ಗೂಡು ತೊರೆದ ಹಕ್ಕಿ ಸೇರಿ ಹೋಯಿತೆ ನೀಲಿ ಮುಗಿಲ ಮರೆಯ ನಾಡು ಹಾಡ ನೆನಪಿಗೆ ಹಿಂಡಿ ತೆವಳುತಿದೆ ಜೀವ ಮುಂದೆ ಬಯಲು, ಹಿಂದೆ ಬಿದ್ದೀತು ಕಾಡು ಮೇಡು ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು ಇನ್ನಿಲ್ಲವಾಯಿತೇ ಆ ಹಕ್ಕಿ ಹಾಡು ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ ಮುರಿದು ಹೋಯಿತೆ ಈಗ ಆ ಪುಟ್ಟ ಗೂಡು ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು ಇನ್ನಿಲ್ಲವಾಯಿತೇ ಆ ಹಕ್ಕಿ ಹಾಡು...!!
Roman script
Thappi hoyithalle chukki belakina jaadu innillavaayithe aa hakki haadu Hasirele hoovina naduve hullu haasige muridu hoyithe eega aa putta goodu ||Thappi hoyithalle|| Hani haniyagi thonedu thoogida preethi haridu choorayite edeya olavina beedu Rekke badidotthi etthikolluva hakki haadina jaadu hidiyuttha nanna paadu ||Thappi hoyithalle|| Elli hoyithu valase goodu thoreda hakki seri hoyithe neeli mugila mareya naadu Haada nenapige hindi thevaluthide jeeva munde bayalu hinde biddithu kaadu medu Thappi hoyithalle chukki belakina jaadu innillavaayithe aa hakki haadu Hasirele hoovina naduve hullu haasige muridu hoyithe eega aa putta goodu... Thappi hoyithalle chukki belakina jaadu innillavaayithe aa hakki haadu.....!!!
Song information
Genre: Bhavageethe
Lyricist: Deshkulkarni
Composer: C. Ashwath
Explore this song
- Composer: C. Ashwath
- Lyricist: Deshkulkarni