ಕನ್ನಡ
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು ಅದಕೇ ಹಿಮ್ಮೇಳವನೆ ಸೋಸಿ ಬಹ ಸುಳಿ ಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು ||ಒಂದು|| ಇಳಿ ಬೆಣ್ಣು ಮೈದೊಳೆದು ಮಕರಂದ ಅರಿಶಿಣದಿ ಹೂ ಮೂಡಿದ ಮಧುಮಗಳ ಹೊಲುತಿತ್ತು ಮೂಡಣದಿ ನೇಸರನ ನಗೆ ಮೊಗದ ಶ್ರೀಕಾಂತಿ ಬಿಳಿಯ ಮೋಡದ ಹಿಂದೆ ಹೊಳೆಯುತಿತ್ತು ||ಒಂದು|| ಹುಲ್ಲೆಸಳು, ಹೂಪಕಳೆ ಮುತ್ತು ಹನಿಗಳ ಮಿಂಚು ಸೊಡರಿನಲಿ ಆರತಿಯ ಬೆಳಗುತ್ತಿತ್ತು ಕೊರಳುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು ||ಒಂದು|| ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ ದುಂಬಿಗಳ ಓಂಕಾರ ಹೊಮ್ಮುತಿತ್ತು ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ ಚಿಟ್ಟೆ ರಿಂಗಣ ತುಣಿತ ಹಾಕುತಿತ್ತು ||ಒಂದು|| ಉಷೆಯ ನುಂಗದಪಿನಲಿ ಹರ್ಷ ಬಾಷ್ಪಗಳಂತೆ ಮರದ ಹನಿ ತಟಪಟನೆ ಉದುರುತಿತ್ತು ಸೃಷ್ಟಿ ಲೀಲೆಯೊಳಿಂತು ಥಲ್ಲೀನವಾದಮನ ಮುಂಬಾಳ ಸವಿಗನಸ ನೆನೆಯುತಿತ್ತು ||ಒಂದು||.
Roman script
Ondu munjaavinalli thunturina sone male So endu shruti hididu suriyuthittu Adake himmelavane sosi baha suli gaali Tengu garigala naduve nusuluthittu ||ondu|| Ili bennu maidoledu makkaranda arishinadi Hoo moodida madhumagala holutittu Moodanadi nesarana nage mogada shreekanti Bili modada hinde holeyuthittu ||ondu|| Hullesalu, hoopakale mutthu hanigala minchu Sodarinalli aaratheya belaguthittu Koralu kki haadutih chikka pakkiya balaga Shubhamastu shubhamastu ennuthittu ||ondu|| Thalira thoranadalli balli madagalalli Dumbigala omkara hommuthittu Hacha hasurina pacche nelagattinangaladi Chitte ringana tunita haakuthittu ||ondu|| Usheya nungadapinali harsha baashpagalaante Marada hani tatapatne udurutittu Srushti leelayolintu thalleenavada mana Mumbai saviganasa neneyuthittu ||ondu||
Song information
Genre: Bhavageethe
Lyricist: Chennaveera Kanavi
Composer: C. Ashwath
Explore this song
- Composer: C. Ashwath
- Lyricist: Chennaveera Kanavi