ಕನ್ನಡ
ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ ಚಿಂತೆ ಬಿಡಿ ಹೂವ ಮುಡಿದಂತೆ || ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ ಜೀವದಲಿ ಜಾತ್ರೆ ಮುಗಿದಂತೆ ಎರಡನೆಯ ಹಗಲು ಇಳಿ ಮುಖವಿಲ್ಲ ಇಷ್ಟು ನಗು ಮೂಗುತಿಯ ಮಿಂಚು ಒಳ ಹೊರಗೆ ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು ಬೇಲಿಯಲಿ ಹಾವು ಹರಿದಂತೆ ಮೂರನೆಯ ಸಂಜೆ ಹೆರಳಿನ ತುಂಬ ದಂಡೆ ಹೂ ಹೂವಿಗೂ ಜೀವ ಬಂದಂತೆ ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗು ಹುಣ್ಣಿಮೆಯ ಹಾಲು ಹರಿದಂತೆ
Roman script
Modala dina mouna aluve titige bandante Chinte bidi hoova mudidante || Hattu kade kannu sannage deepa uridante Jeevadali jatre mugidante Eradaneya hagalu ili-mukhavilla istu nagu Mugutiya minchu ola horage Neerolage veene mididante adida maatu Beliyali havu haridante Muraneya sanje heralina tumba dande hoo Hoovigu jeeva bandante Sanjeyali ratri ilidante biru banigu Hunnimeya halu haridante
Song information
Genre: Bhavageethe
Lyricist: K. S. Narasimha Swamy
Composer: C. Ashwath
Explore this song
- Composer: C. Ashwath
- Lyricist: K. S. Narasimha Swamy