ಕನ್ನಡ
ಘಮ ಘಮ ಘಮಾಡಿಸ್ತಾವ ಮಲ್ಲಿಗೆ ನೀ ಹೊರಟಿದ್ದೀಗ ಎಲ್ಲಿಗೆ ತುಳುಕ್ಯಾಡುತ್ತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ ಕನಸು ತೇಲಿ ಬರುತ್ತಾವ ಹುಡುಕಿ ನೀ ಹೊರಟಿದ್ದೀಗ ಎಲ್ಲಿಗೆ || ಘಮ || ಚಿಕ್ಕಿ ತೋರಿಸ್ತಾವ ಚಾಚಿ ಬೆರಳ ಚಂದ್ರಮ ಕನ್ನಡಿ ಹರಳ ಮನ ಸೋತು ಆಯಿತು ಮರುಳ ನೀ ಹೊರಟಿದ್ದೀಗ ಎಲ್ಲಿಗೆ || ಘಮ || ನೆರಳಲ್ಲಾಡುತ್ತಾವ ಮರದ ಬುಡಕ್ಕ ಕೇರಿ ತೇರಿ ನೂಗುತ್ತಾವ ದಡಕ್ಕ ಹಿಂಗ ಬಿಟ್ಟು ಇಲ್ಲಿ ನನ್ನ ನಡಕ ನೀ ಹೊರಟಿದ್ದೀಗ ಎಲ್ಲಿಗೆ || ಘಮ || ನನ್ನ ನಿನ್ನ ಒಂದತನದಾಗ ಹಾಡು ಹುಟ್ಟಿ ಒಂದು ಮನದಾಗ ಬೆಳದಿಂಗಳಾತು ಬನದಾಗ ನೀ ಹೊರಟಿದ್ದೀಗ ಎಲ್ಲಿಗೆ || ಘಮ || ತುಳುಕ್ಯಾಡುತ್ತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ ಕನಸು ತೇಲಿ ಬರುತ್ತಾವ ಹುಡುಕಿ ನೀ ಹೊರಟಿದ್ದೀಗ ಎಲ್ಲಿಗೆ || ಘಮ ||
Roman script
Ghama ghama ghammadastava mallige nee horatiddeega ellige || Tulukyadatava Tookadiki Evi Appatava Kan Duduki Kanasu Teli Baratava Huduki Nee Horatiddeega Ellige Chikki toristava chachi berala Chandrama Kannadi Harala Mana Sotu Ayitu Marula Nee Horatiddeega Ellige Neralladatava marada budaka Keriteri Nugatava Dadaka Hinga Bittu Illi Nanna Nadaka Nee Horatiddeega Ellige Nanna ninna ondu tanadaga Hadu Hutti Ondu Manadaga Beladingalatu Banadaga Nee Horatiddeega Ellige Tulukyadatava Tookadiki Evi Appatava Kan Duduki Kanasu Teli Baratava Huduki Nee Horatiddeega Ellige
Song information
Genre: Bhavageethe
Lyricist: Da Ra Bendre
Composer: C. Ashwath
Explore this song
- Composer: C. Ashwath
- Lyricist: Da Ra Bendre