ಕನ್ನಡ
ಎನಿತು ಇನಿದು ಈ ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯು! ||ಪ|| ಗಾನವ ಬೆರೆಯಿಸಿ..ವೀಣೆಯ ದನಿಯೊಳು ವಾಣಿಯ ನೇವುರ..ನುಡಿಸುತೆ ಕುಣಿಯಲು ಮಾಣದೆ ಮೆರೆಯುವ ಮಂಜುಲ ರವವೋ ಎನಿತು ಇನಿದು ಈ ಕನ್ನಡ ನುಡಿಯು !||೧|| ರಂಗನ ಮುರಲಿಯ..ಹಿಂಗದ ಸರದಲಿ ಹೆಂಗಳೆಯರು ಬೆಳದಿಂಗಳಿರುಳಲಿ ಸಂಗೀತವನೊರೆದಂಗವಿದೇನೋ ಎನಿತು ಇನಿದು ಈ ಕನ್ನಡ ನುಡಿಯು!||೨|| ಗಿಳಿಗಳು ಉಲಿಯುವ ಮೆಲುಮಾತುಗಳೋ ಕಳಕಂಠಗಳಾ ಚೆಲುವಿನ ಕುಕಿಲೊ ಅಳಿಗಳ ಬಳಗದ ಬೆಳಗಿನ ಉಲಿಯೋ ಎನಿತು ಇನಿದು ಈ ಕನ್ನಡ ನುಡಿಯು!||೩||
Roman script
Enithu inidu ee Kannada nudiyu Manavanu thanisuva mohana sudheyu! ||Pa|| Gaanava bereyisi veeneya daniyolu Vaaniya neevura nudisute kuniyalu Maanade merayuva manjula ravavo Enithu inidu ee Kannada nudiyu! ||1|| Rangana muralia hingada saradali Hengaleyaru beladingalirulali Sangeetavanoredangavideno Enithu inidu ee Kannada nudiyu! ||2|| Giligalu uliyuva melumaathugalo Kalakanthagalaa cheluvina kukilo Aligala balagada belagina uliyo Enithu inidu ee Kannada nudiyu! ||3||
Song information
Genre: Bhavageethe
Lyricist: Bettageri Krishna Sharma
Composer: Upasana Mohan
Explore this song
- Composer: Upasana Mohan
- Lyricist: Bettageri Krishna Sharma