ಕನ್ನಡ
ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು ಕಡಲೂ ನಿನ್ನದೆ, ಹಡಗೂ ನಿನ್ನದೆ ಮುಳುಗದಿರಲಿ ಬದುಕು ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು ಬೆಟ್ಟವು ನಿನ್ನದೇ, ಬಯಲು ನಿನ್ನದೇ ಹಬ್ಬಿ ನಗಲಿ ಪ್ರೀತಿ..... ಬೆಟ್ಟವು ನಿನ್ನದೇ, ಬಯಲು ನಿನ್ನದೇ ಹಬ್ಬಿ ನಗಲಿ ಪ್ರೀತಿ..... ನೆಳಲೋ, ಬಿಸಿಲೋ ಎಲ್ಲವು ನಿನ್ನದೇ ನೆಳಲೋ, ಬಿಸಿಲೋ ಎಲ್ಲವು ನಿನ್ನದೇ ಇರಲಿ ಏಕರೀತಿ ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಆಗೊಂದು ಸಿಡಿಲು, ಈಗೊಂದು ಮುಗಿಲು ನಿನಗೆ ಅಲಂಕಾರ ಆಗೊಂದು ಸಿಡಿಲು, ಈಗೊಂದು ಮುಗಿಲು ನಿನಗೆ ಅಲಂಕಾರ ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು ನಿನಗೆ ನಮಸ್ಕಾರ ಕಡಲು ನಿನ್ನದೇ, ಹಡಗು ನಿನ್ನದೇ ಮುಳುಗದಿರಲಿ ಬದುಕು ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ ಆ ಮಹಾ ಕಾವ್ಯ, ಈ ಭಾವ ಗೀತೆ ನಿನ್ನ ಪದಧ್ವನಿ... ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು ಕಡಲೂ ನಿನ್ನದೆ, ಹಡಗೂ ನಿನ್ನದೆ ಮುಳುಗದಿರಲಿ ಬದುಕು
Roman script
Deepavu Ninnadhe.. Gaaliyu Ninnadhe.. Aaradhirali Belaku.. Kadalu Ninnadhe.. Hadagu Ninnadhe.. Mulugadhirali Badhuku.. || Deepavu.. || (Bettavu Ninnadhe Bayalu Ninnadhe.. Habbinadhali Preethi.. Nelalu Bisilu Ellavu Ninnave Irali Ekareethi.. || Deepavu.. || Aagondhu Sidilu.. Eegondhu Mugilu.. Ninage Alankaara.. Allondhu Hakki.. Illondu Mugulu.. Ninage Namaskaara.. || Deepavu.. || Alli Rana Dhundhumbhi.. Illondhu Veene.. Ninna Prathidhwani.. Aa Mahaakaavya.. Ee Bhaavageethe.. Ninna Padadhwani.. || Deepavu.. ||
Song information
Genre: Bhavageethe
Lyricist: K. S. Narasimha Swamy
Composer: C. Ashwath
Explore this song
- Composer: C. Ashwath
- Lyricist: K. S. Narasimha Swamy