ಕನ್ನಡ
ಅಂದವೋ ಅಂದವು ಕನ್ನಡ ನಾಡು ನನ್ನ ಗೂಡು ಅಲ್ಲಿದೆ ನೋಡು ಚಂದವೋ ಚಂದವು ನನ್ನಯ ಗೂಡು ನನ್ನ ಹಾಡು ಅಲ್ಲಿದೆ ನೋಡು ಕಾವೇರಿ ಹರಿವಳು, ನನ್ನ ಮನೆಯ ಅಂಗಳದಲ್ಲಿ ಕಸ್ತೂರಿ ಮೆರೆವಳು, ನನ್ನ ಮಡದಿ ಮಲ್ಲಿಗೆಯಲ್ಲಿ ಅಂದವೋ ಅಂದವು ಕನ್ನಡ ನಾಡು ನನ್ನ ಗೂಡು ಅಲ್ಲಿದೆ ನೋಡು ನನ್ನ ಮನೆಯ ಮುಂದೆ ಸಹ್ಯಾದ್ರಿ ಗಿರಿಯ ಹಿಂದೆ ದಿನವು ನೂರು ಶಶಿಯು ಹುಟ್ಟಿ ಬಂದರೂ ನನ್ನ ರತಿಯ ಮೊಗವ ಮರೆಮಾಚದಂತ ನಗುವ ಅವನೆಂದು ತಾರಲಿಲ್ಲವೇ ಪ್ರಿಯೇ ನನ್ನ ಕಣ್ಣ ಮುಂದೆ ಮರಗಿಡದ ಮಂದೆ ಮಂದೆ ಕೋಟಿ ಪಕ್ಷಿ ಕೂಗು ಕೇಳಿ ಬಂದರೂ ನನ್ನ ಚೆಲುವೆ ಹಾಡು ಅನುರಾಗದಿಂದ ನೋಡು ಆ ರಾಗ ನೋಟ ಕಾಣದೇ ಪ್ರಿಯೇ ಸಹ್ಯಾದ್ರಿ ಕಾಯ್ವಳು, ನನ್ನ ಮನೆಯ ಕರುಣೆಯಮೇಲೆ ಆಗುಂಬೆ ನಗುವಳು, ನನ್ನ ಮಡದಿ ನೊಸಲಿನ ಮೇಲೆ ಅಂದವೋ ಅಂದವು ಕನ್ನಡ ನಾಡು ನನ್ನ ಗೂಡು ಅಲ್ಲಿದೆ ನೋಡು ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ ಇಂದು ನಾಳೆ ಸಿಹಿಯ ಸ್ನೇಹವೆಂಬುದು ಆಂತರಾಳವೆಂಬ ನೇತ್ರಾವತಿಯ ತುಂಬ ಈ ಸ್ನೇಹ ಜಲದ ಸೆಲೆಯು ನಿಲ್ಲದೋ ಉಸಿರು ಎಂಬ ಹಕ್ಕಿ ಇದೆ ಗೂಡಿನಲ್ಲಿ ಸಿಕ್ಕಿ ಕುಹು ಕುಹು ಎಂದರೇನೆ ಜೀವನ ಬೆಚ್ಚಗಿರುವ ಮನೆಯ ತನ್ನ ಇಚ್ಚೆಯರಿವ ಸತಿಯ ಸವಿ ಪ್ರೇಮ ದೊರೆತ ಬಾಳು ಧನ್ಯವೋ ಈ ನಾಡು ನುಡಿಯಿದು, ನನಗೆ ಎಂದೂ ಕೋಟಿ ರುಪಾಯಿ ಈ ಬಾಳ ಗುಡಿಯಲಿ, ನಿಜದ ಮುಂದೆ ನಾನು ಸಿಪಾಯಿ ಅಂದವೋ ಅಂದವು ಕನ್ನಡ ನಾಡು ನನ್ನ ಗೂಡು ಅಲ್ಲಿದೆ ನೋಡು ಚಂದವೋ ಚಂದವು ನನ್ನಯ ಗೂಡು ನನ್ನ ಹಾಡು ಅಲ್ಲಿದೆ ನೋಡು ಕಾವೇರಿ ಹರಿವಳು, ನನ್ನ ಮನೆಯ ಅಂಗಳದಲ್ಲಿ ಕಸ್ತೂರಿ ಮೆರೆವಳು, ನನ್ನ ಮಡದಿ ಮಲ್ಲಿಗೆಯಲ್ಲಿ
Roman script
Andavo Andavo Kannada Naadu Nanna Goodu Allide Nodu Chandavo Chandavo Nannaya Goodu Nanna Haadu Allide Nodu Kaveri Harivalu Nanna Maneya Angaladalli Kasthoori Merevali Nanna Madadi Malligeyalli<br. Andavo Andavo Kannada Naadu Nanna Goodu Allide Nodu Nanna Maneya Munde Sahyadri Giriya Hinde Dinavu Nooru Shashiyu Hutti Bandaru Nanna Rathiya Mogava Mare Maachadantha Naguva Avanendu Thaaralillave Priye Nanna Kanna Munde Mara Gidada Mande Mande Koti Pakshi Koogu Keli Bandaroo Nanna Cheluve Haadu Anuraagadinda Nodu Aa Raaga Nota Kanade Priye Sahyaadri Kaayvalu Nanna Maneya Karuneya Mele Aagumbe Naguvalu Nanna Madadi Nosavina Vele Andavo Andavo Kannada Naadu Nanna Goodu Allide Nodu Nalegintha Inde Sihiyaada Divasavanthe Indu Naale Sihiya Snehavembudu Antharaalavemba Nethravathiya Thumba Ee Sneha Jalada Seleyu Nillado Usiru Emba Hakki Yede Goodinalli Sikki Koohoo Koohoo Yendarene Jeevana Bechchagiruva Maneya Thanna Ichche Ariva Sathiya Savi Prema Doretha Baalu Dhanyavo Ee Naadu Nudi Idu Nanage Yendu Koti Rupaayi Ee Baala Gudiyali Nijada Munde Naanu Sipaayi Andavo Andavo Kannada Naadu Nanna Goodu Allide Nodu Chandavo Chandavo Nannaya Goodu Nanna Haadu Allide Nodu Kaveri Harivalu Nanna Maneya Angaladalli Kasthoori Merevali Nanna Madadi Malligeyalli Andavo Andavo Kannada Naadu Nanna Goodu Allide Nodu
Song information
Genre: Patriotic Song
Lyricist: Hamsalekha
Composer: Hamsalekha
Explore this song
- Composer: Hamsalekha
- Lyricist: Hamsalekha