ಕನ್ನಡ
ಲ ಲ ಲ ಲ ... hmmm ... ಆಹಾ .. ಲ ಲ .. ನಗುವ ನಯನ ಮಧುರ ಮೌನ ಮಿಡಿವಾ ಹೃದಯ ಇರೆ ಮಾತೇಕೆ ಹೊಸ ಭಾಷೆಯಿದು, ರಸ ಕಾವ್ಯವಿದು ಇದ ಹಾಡಲು ಕವಿ ಬೇಕೇ ನಗುವ ನಯನ, ಮಧುರ ಮೌನ ಮಿಡಿವಾ ಹೃದಯ ಇರೆ ಮಾತೇಕೆ ನಿಂಗಾಗಿ ಹೇಳುವೆ ಕಥೆ ನೂರನು ನಾನಿಂದು ನಗಿಸುವೆ ಈ ನಿನ್ನನು ಇರುಳಲ್ಲು ಕಾಣುವೆ ಕಿರು ನಗೆಯನು ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು ಜೊತೆಯಾಗಿ ನಡೆವೆ ನಾ ಮಳೆಯಲೂ ಬಿಡದಂತೆ ಹಿಡಿವೆ ಈ ಕೈಯ್ಯನು ಗೆಳೆಯ ಜೊತೆಗೆ ಹಾರಿ ಬರುವೆ ಬಾನ ಎಲ್ಲೆ ದಾಟಿ ನಲಿವೆ ನಗುವ ನಯನ ಮಧುರ ಮೌನ ಮಿಡಿವಾ ಹೃದಯ ಇರೆ ಮಾತೇಕೆ ಈ ರಾತ್ರಿ ಹಾಡೋ ಪಿಸುಮಾತಲಿ ನಾ ಕಂಡೆ ಇನಿದಾದ ಸವಿ ರಾಗವ ನೀನಲ್ಲಿ ನಾನಿಲ್ಲಿ ಏಕಾಂತದಿ ನಾ ಕಂಡೆ ನನ್ನದೇ ಹೊಸ ಲೋಕವ ಈ ಸ್ನೇಹ ತಂದಿದೆ ಎದೆಯಲ್ಲಿ ಎಂದೆಂದೂ ಅಳಿಸದ ರಂಗೋಲಿ ಆಸೆ ಹೂವ ಹಾಸಿ ಕಾದೆ ನಡೆ ನೀ ಕನಸಾ ಹೊಸಕಿ ಬಿಡದೆ ನಗುವ ನಯನ ಮಧುರ ಮೌನ ಮಿಡಿವಾ ಹೃದಯ ಇರೆ ಮಾತೇಕೆ ಹೊಸ ಭಾಷೆಯಿದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೇ
Roman script
La la la la … Hmmm … aha .. la la .. Naguva nayana madhura mauna Midiva hridaya ire mateke Hosa bhaashe idu, rasa kaavyavidu Ida haadalu kavi beke Naguva nayana, madhura mauna Midiva hridaya ire mateke Ningagi heluve kathe nooranu Naanindu nagisuve ee ninnanu Irulallu kaanuve kiru nageyanu Kannalli huccedde honganasanu Jotheyagi nadeve naa maleyalu Bidadante hidive ee kaiyyanu GeLeya jothege haari baruve Baana elle daati nalive Naguva nayana madhura mauna Midiva hridaya ire mateke Ee raatri haadoo pisumaata li Naa kande inidaada savi raagava Neenalli naanilli ekaantadi Naa kande nannade hosa lokava Ee sneha tandide edeyalli Endendoo alisada rangoli Aase hoova haasi kaade Nade nee kanasa hosaki bidade Naguva nayana madhura mauna Midiva hridaya ire mateke Hosa bhaashe idu rasa kaavyavidu Ida haadalu kavi beke .
Song information
Genre: Romantic Drama
Lyricist: R. N. Jayagopal
Composer: Ilaiyaraaja
Explore this song
- Composer: Ilaiyaraaja
- Lyricist: R. N. Jayagopal