ಕನ್ನಡ
ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೇರಲು ಬಂದ ರಾ..ಧಿಕೆ... ಹಾಡಲಿ ಹಾಡಲು ಮಾತಲಿ ಹೇಳಲು ಸಾಧ್ಯವೇ ಇಲ್ಲದ ರಾಗ ಮಾಲಿಕೆ..... ಸಖಿ ಸಖಿ ನನ್ನ ರೂಪಸಿ... ಸುಖಿ ಸುಖಿ ನಿನ್ನ ಮೋಹಿಸಿ ನೀನೆ... ನನ್ನ ಪ್ರೇಯಸಿ..... ಜೇನ ದನಿಯೋಳೆ ಮೀನ ಕಣ್ಣೋಳೆ ಸೊಬಗೆ ಮೈ ತುಂಬಿದೆ... ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ..... ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾ...ಗಿದೆ ...ನಾನೂ ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ..... ನಿಹಾರಿಕ... ಆಕರ್ಶಿಕ... ಅನಾಮಿಕ ...ಹೆಸರೇನೆ... ವೆರೊನಿಕ... ಶಿಫಾಲಿಕ... ಇವಾಂಶಿಕ ...ನೀನೇನೇ..... ಅರಳದ ಸುಮಗಳ ಅರಳಿಸುವವಳು ಕುಸುಮಗಳಂತ ಬೆರಳು ಚೆಂಮಲ್ಲಿಗೆಯಂತಿವೆ ಬೆರಳು ಗಿಳಿಗಳ ಬಳಗಕೆ ಸರಿಗಮ ಕಲಿಸುವ ಇನಿಧನಿ ಜಿನುಗೋ ಕೊರಳು ಬಲು ವಿಸ್ಮಯ ನಿನ್ನ ಕೊರಳು..... ಸೌಂದರ್ಯದಲ್ಲಿ... ಗಾಂಭೀರ್ಯವಂತೆ.... ಆಂತರ್ಯದಲ್ಲಿ ...ಔದಾರ್ಯವಂತೆ... ನೀನೇ.... ನನ್ನ ಪ್ರೇಯಸಿ..... ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯಾ ಮುದ್ರೆಯೂ .... ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯು ಭದ್ರೆಯು ನಾನು ಶ್ರೀ ಕೃಷ್ಣ ನೀನೇ ನನ ಭಾಮೆ ಮೂಡಿದೆ ಪ್ರೀತಿಯು.... ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು..... ಲೀಲಾವತಿ ...ಶರಾವತಿ ...ನೀಲಾವತಿ... ಹೆಸರೇನೇ... ಗಂಗಾವತಿ... ತುಂಗಾವತಿ... ನೇತ್ರಾವತಿ ...ನೀನೇನೇ..... ನೀ ನಕ್ಕರೆ ಸಕ್ಕರೆ ಅರೆರೆರೆ ಎಂದೂ ಬ್ರಹ್ಮನಿಗೂನು ಬೆರಗು ನೀನೆಂದರೆ ಬೆರಗಿಗೂ ಬೆರಗು... ಬರೆದರೆ ಮುಗಿಯದು ಪದದಲಿ ಸಿಗದು ರತಿಯರಿಗಿಂತ ಸೊಬಗು ಮೈ ಮಾಟವೇ ಮೋಹಕ ಸೊಬಗು..... ಲಾವಣ್ಯ ನೋಡಿ... ನಾ ಧನ್ಯನಾದೆ... ತಾರುಣ್ಯ ಮೋಡಿ... ಹೀಗಾಗಿ ಹೋದೆ... ನೀನೇ.... ನನ್ನ ಪ್ರೇಯಸಿ..... ಜೇನ ದನಿಯೋಳೆ ಮೀನ ಕಣ್ಣೋಳೆ ಸೊಬಗೆ ಮೈ ತುಂಬಿದೆ.... ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ..... ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ ನಾನೂ ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ.....
Roman script
dwaapara daatut nannane nodalu nannane seralu banda ra..dhike... haadali haadalu matali helalu saadhyave illada raaga maaliké..... sakhi sakhi nanna roopasi... sukhi sukhi ninna mohisi neene... nanna preyasi..... jena daniyole meena kannole sobage mai tumbide... hamsa nadeyole edege ilidole jeeva jhal endide..... bere daarine illi nanaginne neenu sikka...gide... naanu hudukidda nanna nildana neene innenide..... nihaarika... aakarshika... anaamika ...hesarene... veronika... shifaalika... ivaamshika ...neeneene..... aralada sumagala aralisuvallu kusumagalanta beralu, chenmalligeyantive beralu giliga balagake sarigama kalisuve inidhani jinugo koralu balu vismaya ninna koralu..... soundaryadalli... gambheeryavante.... antaryadalli ...audaryavante... neene.... nanna preyasi..... paada padyana bareda hagiruva hejje ya mudreyu.... ninna nade kandu hinde barabahudu tungeyu bhadreyu naanu shri krishna neene nanna bhaame moodide preetiya.... estu janmagala daati bandaytu ee kshana saakshiyu..... leelavati ...sharavati ...neelavati... hesarene... gangavati... tungavati... netraavati ...neeneene..... nee nakkare sakkare arerere endoo brahmanigunu beragu neenendare beragigu beragu... baredare mugiyadu padadali sigadu ratiyariginta sobagu mai maatve mohaka sobagu..... laavanya nodi... naa dhanyanade... taarunya modhi... heegaagi hode... neene.... nanna preyasi..... jena daniyole meena kannole sobage mai tumbide.... hamsa nadeyole edege ilidole jeeva jhal endide..... bere daarine illi nanaginne neenu sikkagide naanu hudukidda nanna nildana neene innenide.....
Song information
Genre: Romantic Drama
Lyricist: Dr. V. Nagendra Prasad
Composer: Arjun Janya
Explore this song
- Composer: Arjun Janya
- Lyricist: Dr. V. Nagendra Prasad