ಕನ್ನಡ
ದೇವ ಬಂದ ನಮ್ಮ ಸ್ವಾಮಿ ಬಂದನೋ | ದೇವರ ದೇವ ಶಿಖಾಮಣಿ ಬಂದನೋ || ಪ || ಉರಗಶಯನ ಬಂದ ಗರುಡಗಮನ ಬಂದ | ನರನಿಗೊಲಿದವ ಬಂದ | ನಾರಾಯಣ ಬಂದ || ೧ || ಮಂದರೋದ್ಧರ ಬಂದ | ಮಾಮನೋಹರ ಬಂದ | ವೃಂದಾವನಪತಿ ಗೋವಿಂದ ಬಂದ || ೨ || ಚಕ್ರಧರನು ಬಂದ | ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ || ೩ || ಪಕ್ಷಿವಾಹನ ಬಂದ | ಲಕ್ಷ್ಮೀರಮಣ ಬಂದ | ಅಕ್ಷಯಫಲದಾ | ಲಕ್ಷ್ಮಣಾಗ್ರಜ ಬಂದ || ೪ || ಪೂತನಿಸಂಹರಣ ಬಂದ | ಪುರುಹೂತವಂದ್ಯ ಬಂದ | ಮಾತುಳನ ಮಡುಹಿದ | ಗೋವಿಂದ ಬಂದ || ೫ || ನಿಗಮಗೋಚರ ಬಂದ | ನಿತ್ಯತೃಪ್ತನು ಬಂದ | ನಗೆಮುಖ ಪುರಂದರ ವಿಠಲ ಬಂದನೋ || ೬ ||
Roman script
Deva banda namma swaami bandano devara deva shikaamani bandano Uraga shayana banda garuda gamana banda Nara golidava banda naaraayana banda |1| Mandarodhara banda garuda gamana banda Brindavana pathi govinda bandano |2| Nakraharanu banda chakradharanu banda Aakruragolida tivikrama bandano |3| Pakshivaahana banda lakshmanagraja banda Akshaya phala da Sree lakshmiramana bandano |4| Nigama gochara banda nitya truptanu banda Nagemukha purandara vithala bandano |5|
Song information
Genre: Devotional
Lyricist: Purandara Dasa
Composer: B. V. Srinivas
Explore this song
- Composer: B. V. Srinivas
- Lyricist: Purandara Dasa