ಕನ್ನಡ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೆ ನವಿಲೂರ ಮನೆಯಿಂದ ನುಡಿಯೊಂದು ತಂದಿಹೆನು ಬಳೆಯ ತೊಡಿಸುವುದಿಲ್ಲ ನಿಮಗೆ || ಮುಡಿದ ಮಲ್ಲಿಗೆಯರಳು ಬಾಡಿಲ್ಲ ರಾಯರೆ ತೌರಿನಲಿ ತಾಯಿ ನಗುತಿಹರು ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೆ ಅಮ್ಮನಿಗೆ ಬಳೆಯ ತೊಡಿಸಿದರು ಅಂದು ಮಂಗಳವಾರ ನವಿಲೂರ ಕೇರಿಯಲಿ ಓಲಗದ ಸದ್ದು ತುಂಬಿತ್ತ ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ ಅಂಗಳದ ತುಂಬ ಜನವಿತ್ತು ಹಬ್ಬದೂಟವನುಂಡು ಹಸೆಗೆ ಬಂದರು ತಾಯಿ ಹೊಳೆದಿತ್ತು ಕೊರಳಿನಲಿ ಪದಕ ಒಬ್ಬರೆ ಹಸೆಗೆ ಬಂದರು ತಾಯಿ ಬಿಂಕದಲಿ ಕಣ್ತುಂಬ ನೋಡಿದೆನು ಮುದುಕ ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ ಸೆರಗಿನಲಿ ಕಣ್ಣೀರನೊರಸಿ ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ ದೀಪದಲಿ ಬಿಡುಗಣ್ಣ ನಿಲಿಸಿ ಬೇಕಾದ ಹಣ್ಣಿಹುದು ಹೂವಿಹುದು ತೌರಿನಲಿ ಹೊಸ ಸೀರೆ ರತ್ನದಾಭರಣ ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ ನಿಮಗಿಲ್ಲ ಒಂದು ಹನಿ ಕರುಣ ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು ಕುದಿಯಬಾರದು ನನ್ನ ದೊರೆಯೆ ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು ಒಣಗಬಾರದು ಒಡಲ ಚಿಲುಮೆ ಮುನಿಸು ಮಾವನ ಮೇಲೆ ಮಗಳೇನ ಮಾಡಿದಳು ನಿಮಗೇತಕೆ ಕಲ್ಲು ಮನಸು ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು ಅಮ್ಮನಿಗೆ ನಿಮ್ಮದೇ ಕನಸು
Roman script
Balegara chennayya bagilige bandihenu Olage baralappaneye doreye Naviloora maneyinda nudiyonda tandihenu Baleya todisuvudilla nimage || Mudida malligeyaralu badilla rayare Tourinali tayi nagutiharu Kudida neeralugilla koragadiri rayare Ammanige baleya todisidaru Andu mangalavara naviloora keriyali Olagada saddu tumbittu Baleya todisidarandu ammanige towrinali Angalada tumba janavittu Habbadoota-vanundu hasege bandaru tayi Holedittu koralinali padaka Obbare hasege bandaru tayi binkadali Kantumba nodidenu muduka Sirigowriyante bandaru tayi hasemanege Seraginali kanneera-norasi Sukhadolage nimma nenedaru tayi gunavante Deepadali biduganna nilisi Bekada hannihudu hoovihudu towrinali Hosa seere ratna-dabharana Tayi koraguvaralli neevilla-doorinali Nimagilla ondu hani karuna Dinavada basuri ussendu nittusireledu Kudiyabaradu nanna doreye Hindabaradu dundu malligeya dandeyanu Onagabaradu odala chilume Munisu mavana mele magalena madidalu Nimagetake kallu manasu Hogi banniri omme kai mugidu beduvenu Ammanige nimmade kanasu
Song information
Genre: Bhavageethe
Lyricist: K. S. Narasimhaswamy
Composer: C. Ashwath
Explore this song
- Composer: C. Ashwath
- Lyricist: K. S. Narasimhaswamy