ಕನ್ನಡ
ಬದುಕು ಮಾಯೆಯ ಮಾಟ ಮಾತು ನೊರೆ-ತೆರೆಯಾಟ ಜೀವ ಮೌನದ ತುಂಬ ಗುಂಬ ಮುನ್ನೀರು ಕರುಣೋದಯದ ಕೂಡ ಅರುಣೋದಯವು ಇರಲು ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು ನಿಜದಲ್ಲೆ ಒಲವಿರಲಿ ಚೆಲುವಿನಲೆ ನಲಿವಿರಲಿ ಒಳಿತಿನಲೆ ಬಲವಿರಲಿ ಜೀವಕೆಳೆಯಾ ದೇವ ಜೀವನ ಕೇಂದ್ರ ಒಬ್ಬೊಬ್ಬನು ಇಂದ್ರ ಏನಿದ್ದರು ಎಲ್ಲ ಎಲ್ಲೆ ತಿಳಿಯಾ ಆತನಾಕೆಯೆ ನಮ್ಮ ಜೀವನೌಕೆಯ ತಮ್ಮ ಧ್ರುವ ಮರೆಯದಂತೆ ನಡೆಸುತ್ತಲಿರಲಿ ಈ ನಾನು ಆ ನೀನು ಒಂದೆ ತಾನಿನ ತಾನು ತಾಳಲಯ ರಾಗಗಳು ಸಹಜ ಬರಲಿ
Roman script
karunodayada kuda arunodayavu iralu edeyu tumbuttalide hoccha honneeru Nijadalle olavirali cheluvinale nalivirali olitinale bhalavirali jeeva keLeya deva jeevana kendra obbobbanu indra Eniddaru ella elle tiliya Atanakeye namma jeeva noukeya tamma dhruva mareyadante nadesuttalirali ee nanu aa neenu onde tanina tanu tala laya ragagalu sahaja barali
Song details
Genre: Bhavageethe
- Composer: C. Ashwath
- Lyricist: Da Ra Bendre